ಎಂ.ಬಿ.ಕುಕ್ಯಾನ್, ಪುತ್ತೂರಿನ ಮೂಲದವರು. ಉದ್ಯಮಿ, ಮತ್ತು ಉತ್ತಮ ಸಮಾಜಸೇವಕರು. ಮುಂಬಯಿನ ಹಿರಿಯಕವಿಗಳಲ್ಲೊಬ್ಬರು. === ಜೀವನ === 'ಕುಕ್ಯಾನ್,' ಕಾಲೇಜಿನ ದಿನಗಳಿಂದಲೂ ಒಳ್ಳೆಯ ಪ್ರತಿಭಾವಂತ ವಿದ್ಯಾರ್ಥಿಯೆಂದು ಹೆಸರಾಗಿದ್ದರು. ಮೈಸೂರುವಿಶ್ವ ವಿದ್ಯಾಲಯದಿಂದ 'ಎಮ್.ಎ;ಪದವಿಗಳಿಸಿದ್ದಾರೆ. 'ಮುಂಬಯಿನ ಬಿಲ್ಲವರ ಅಸೋಸಿಯೇಷನ್' ಸಂಚಾಲಿತ 'ಅಕ್ಷಯ ಮಾಸ ಪತ್ರಿಕೆ'ಯ ಸಂಪಾದಕರಾಗಿ ೧೬ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 'ಕನ್ನಡ ಸಾಹಿತ್ಯ ಪರಿಷತ್ತಿನ (ಮಹಾರಾಷ್ಟ್ರ ಘಟಕ) ದ ಉಪಾಧ್ಯಕ್ಷ'ರಾಗಿರುತ್ತಾರೆ. ಬಿಲ್ಲವರ ಅಸೋಸಿಯೇಷನ್ ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಉಪ-ಕಾರ್ಯಾಧ್ಯಕ್ಷರಾಗಿ ಕೆಲಸಮಾಡಿದ್ದಾರೆ. 'ಭಾರತ್ ಬ್ಯಾಂಕ್'ನ ಉಪಾಧ್ಯಕ್ಷರಾಗಿ, ಪ್ರಸ್ತುತದಲ್ಲಿ 'ಬ್ಯಾಂಕಿನ ನಿರ್ದೇಶಕ'ರಾಗಿ ದುಡಿಯುತ್ತಿದ್ದಾರೆ. ಬಿಲ್ಲವರ ಆಸೋಸಿಯೇಷನ್ ನ, ಇವರ ಪ್ರಾಯೋಜಕತೆಯಲ್ಲಿ ಮಹಾರಾಷ್ಟ್ರದ ಕನ್ನಡ ಸಾಹಿತಿಗಳಿಗೆ 'ಗುರುನಾರಾಯಣ ಸಾಹಿತ್ಯ ಪ್ರಶಸ್ತಿ'ಯನ್ನು ನೀಡಲಾಗುತ್ತಿದೆ. === ಕೃತಿರಚನೆಗಳು === ಸೌಗಂಧಿಕ, ಸೌರಭಾ, ಸೌಪರ್ಣಿಕಾ, ಸಾಂಪ್ರತ (ಸಂಪಾದಕೀಯ ಬರಹಗಳ ಸಂಗ್ರಹಗಳು) ಪಾವಾಣೆ, ಮೋಸದ ಬೀದಿಗಳು ಮೋಸದ ತಿರುವುಗಳು, ಮೋಸದ ಮುಖಗಳು(ಕಥಾ ಸಂಕಲಗಳು) ಪೂವಕ್ಕನ ತೂಟೆ(ಕವನ ಸಂಕಲನ) ಪ್ರಕಟಿಸಿರುತ್ತಾರೆ. === ಪ್ರಶಸ್ತಿಗಳು === ವರ್ಷ ೨೦೧೫ ರ, ಮುಂಬಯಿಯ ಕರ್ನಾಟಕ ಸಂಘದ, 'ಸಾಧನ ಶಿಖರ ಗೌರವ ಪ್ರಶಸ್ತಿ' ಗಳಿಸಿದ್ದಾರೆ. === ಉಲ್ಲೇಖಗಳು ===